ಕೊಲ್ಯಾಕ್ಸ್

ಬ್ರಜಿಲ್ ದೇಶದ ಮೂಲನಿವಾಸಿಯಾದ ಒಂದು ಆರ್ಕಿಡ್ ಜಾತಿ. ಆರ್ಕಿಡೇಸೀ ಕುಟುಂಬಕ್ಕೆ ಸೇರಿದೆ. ಸುಂದರವಾದ ಹೂಬಿಡುವ ಹಾಗೂ ಅಪ್ಪುಸಸ್ಯವಾದ ಇದನ್ನು ತೂಗು ಕುಂಡಗಳಲ್ಲಿ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ. ಇದರಲ್ಲಿ ಜ್ಯೂಗೋಸಸ್ ಮತ್ತು ಟ್ರೈಟೀರಸ್ ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಜ್ಯೂಗೋಸಸ್ ಪ್ರಭೇದ ಹೆಚ್ಚು ಜನಪ್ರಿಯವಾದುದು.

ಕೊಲ್ಯಾಕ್ಸ್ ಜ್ಯೂಗೋಸಸ್ ಪ್ರಭೇದದ ಮಿಥ್ಯಾಲಶುನಗಳು 2" ಳಿಂದ 3" ಉದ್ದವಾಗಿದ್ದು ಗಾಜಿನಂತೆ ಹೊಳೆಯುತ್ತವೆ. ಒಂದೊಂದು ಲಶುನದಿಂದ ಸುಮಾರು 9" ಉದ್ದವಾಗಿರುವ ಹೊಳೆಯುವ ಹಸಿರು ಬಣ್ಣದ ಎರಡು ಎಲೆಗಳು ಹೊರಡುತ್ತವೆ; ಇವುಗಳ ಆಕಾರ ಭರ್ಜಿಮೊನೆಯಂತೆ, ಮೇಲ್ಮೈ ಒರಟು. ಹೂಗೊಂಚಲು ರೆಸೀಮ್ ಮಾದರಿಯದು. ಇದರಲ್ಲಿ 2-4 ಹೂಗಳು ಇವೆ. ಹೂಗಳಿಗೆ ನವಿರಾದ ವಾಸನೆಯೂ ಕೆನೆಬಣ್ಣವೂ ಇವೆ. ಹೂಗಳು ಗಿಡಗಳ ಮೇಲೆ ಬಹಳ ಕಾಲ ಇರುತ್ತವೆ. ದಳದ ಮೇಲೆ ಕಂದುಬಣ್ಣದ  ಮಚ್ಚೆಗಳು ಮತ್ತು ಚುಕ್ಕೆಗಳು ಇವೆ.  ದಳದ ಪಾಶ್ರ್ವಗಳು ಚಾಕಲೇಟ್ ಕಂದು ಬಣ್ಣಕ್ಕಿವೆ. ಅಲ್ಲಲ್ಲಿ ಊದಾಬಣ್ಣದ ಗೆರೆಗಳೂ ಇವೆ. ಇದರಿಂದಾಗಿ ಹೂ ಚೆಲುವಾಗಿ ಕಾಣುತ್ತದೆ.

ಕೊಲ್ಯಾಕ್ಸ್ ಗಿಡವನ್ನು ಜೈಗೊಪೆಟಲಮ್ ಎಂಬ ಇನ್ನೊಂದು ಜಾತಿಯ ಆರ್ಕಿಡ್ ಸಸ್ಯವೆಂದು ತಪ್ಪಾಗಿ ತಿಳಿಯುವುದುಂಟು. ಆದರೆ ಕೊಲ್ಯಾಕ್ಸ್ ಗಿಡದ ಪರಾಗ ಚೀಲಗಳಿಗೆ ಅನುಬಂಧಿಕೆಗಳಿವೆ(ಪೊಲಿನಿಯ). eóÉೈಗೊಪೆಟಲಮ್‍ನಲ್ಲಿ ಇವು ಇಲ್ಲ. ಇವೆರಡು ಗಿಡಗಳನ್ನು ಅಡ್ಡಹಾಯಿಸಿ eóÉೈಗೊಕೊಲ್ಯಾಕ್ಸ್ ಎಂಬ ಅಡ್ಡತಳಿಯನ್ನು ಪಡೆಯಲಾಗಿದೆ.
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ